Mini Tractor Subsidy: ರಾಜ್ಯದ ರೈತರಿಗೆ ಶೇ.50ರಷ್ಟು ಸಬ್ಸಿಡಿ ದರದಲ್ಲಿ ಮಿನಿ ಟ್ಯಾಕ್ಟರ್ & ಯಂತ್ರೋಪಕರಣ ಪಡೆಯಲು ಅರ್ಜಿ ಆಹ್ವಾನ
ನಮಸ್ಕಾರ ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರ ವತಿಯಿಂದ ರೈತರಿಗೆ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ, ನಮ್ಮ ರಾಜ್ಯ ಸರ್ಕಾರ 2024 ಮತ್ತು 25ನೇ ಸಾಲಿನಲ್ಲಿ ಕೃಷಿ ಯಂತ್ರಗಳ ಖರೀದಿಗೆ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಶೇಕಡ 50ರಷ್ಟು ಸಬ್ಸಿಡಿ ನೀಡುತ್ತಿದೆ ಆದ್ದರಿಂದ ರೈತರು ಈ ಒಂದು ಯೋಜನೆಗೆ ಪ್ರಸ್ತುತ ಅರ್ಜಿ ಸಲ್ಲಿಸಬಹುದು ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು ಮತ್ತು ಯಾವ ರೈತರು ಅರ್ಜಿ ಸಲ್ಲಿಸಬಹುದು ಮತ್ತು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನಿಯ ಮೂಲಕ ತಿಳಿದುಕೊಳ್ಳೋಣ
ಕೃಷಿಭಾಗ್ಯ ಯೋಜನೆ (Mini Tractor Subsidy)..?
ಹೌದು ಸ್ನೇಹಿತರೆ ನಮ್ಮ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಉಪಯೋಗಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳ ಪೈಕಿ ನಮ್ಮ ರಾಜ್ಯ ಸರಕಾರ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಖರೀದಿಗೆ ಹಾಗೂ ಮಿನಿ ಟ್ರಾಕ್ಟರ್ ಖರೀದಿಗೆ ಮತ್ತು ಇತರ ಯಂತ್ರೋಪಕರಣಗಳ ಖರೀದಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ ಆದ್ದರಿಂದ ಆಸಕ್ತಿ ಇರುವಂತಹ ಅರ್ಜಿ ಸಲ್ಲಿಸಬಹುದು
ಹೌದು ಸ್ನೇಹಿತರೆ, ರಾಜ್ಯ ಸರ್ಕಾರ ಇದೀಗ ಈ ಒಂದು ಯೋಜನೆ ಅಡಿಯಲ್ಲಿ ರೈತರಿಗೆ ಮಿನಿ ಟ್ಯಾಕ್ಟರ್ ಹಾಗೂ ಕೃಷಿ ಯಂತ್ರೋಪಕರಣಗಳು ಹಾಗೂ ಹನಿ ನೀರಾವರಿ ಪದ್ಧತಿಗೆ HDPE ಪೈಪ್ಸ್ ಮುಂತಾದ ಉಪಕರಣಗಳನ್ನು ಪಡೆಯಲು ಇದೀಗ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಆಸಕ್ತಿ ಇರುವಂತಹ ರೈತರು ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿ
ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ನೀಡಲಾಗುವ ಯಂತ್ರೋಪಕರಣಗಳ ವಿವರ (Mini Tractor Subsidy).?
ಸ್ನೇಹಿತರೆ ಈ ಯೋಜನೆ ಅಡಿಯಲ್ಲಿ ಮಿನಿ ಟ್ಯಾಕ್ಟರ್, ಟಿಲ್ಲರ್, ರೋಟೋವೇಟರ್, ಕಳೆ ಕೀಳುವ ಯಂತ್ರ, ಪವರ್ ವೀಡರ್, ಡೀಸೆಲ್ ಪಂಪ್ ಸೆಟ್, ಯಂತ್ರ ಚಾಲಿತ ಮೋಟೋ ಕಾರ್ಟ್, ಹಾಗೂ ತುಂತುರು ನೀರಾವರಿ ಘಟಕಗಳ ಕಿಂಕ್ಲರ್ ಪೈಪ್ಸ್, ಮುಂತಾದ ಯಂತ್ರೋಪಕರಣಗಳ ಖರೀದಿಗೆ ಹಾಗೂ ತುಂತುರು ನೀರಾವರಿ ಯೋಜನೆಗೆ ಅಗತ್ಯವಾಗಿ ಬೇಕಾಗುವ ಸ್ಪ್ರಿಂಕ್ಲರ್ ಪೈಪ್ಸ್ ನೀಡಲಾಗುತ್ತಿದೆ
ಎಷ್ಟು ಸಬ್ಸಿಡಿ ನೀಡಲಾಗುತ್ತಿದೆ..?
ಮಿನಿ ಟ್ಯಾಕ್ಟರ್ ಖರೀದಿಗೆ ಹಾಗೂ ಇತರ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇಕಡ 90ರಷ್ಟು ಸಬ್ಸಿಡಿ ನೀಡಲಾಗುತ್ತಿದೆ ಮತ್ತು ಸಾಮಾನ್ಯ ವರ್ಗದ ರೈತರಿಗೆ ಮಿನಿ ಟ್ಯಾಕ್ಟರ್ ಖರೀದಿಗೆ ಹಾಗೂ ಕೃಷಿಗೆ ಸಂಬಂಧಿಸಿದ ಉಪಕರಣಗಳ ಖರೀದಿಗೆ ಶೇಕಡ 50ರಷ್ಟು ಸಬ್ಸಿಡಿ ಈ ಒಂದು ಯೋಜನೆ ಅಡಿಯಲ್ಲಿ ರೈತರಿಗೆ ಸಿಗಲಿದೆ ಲಾಭ ಪಡೆದುಕೊಳ್ಳಿ
ಕೃಷಿ ಭಾಗ್ಯ ಯೋಜನೆಯಲ್ಲಿ ಲಭ್ಯವಿರುವ ಸೌಲಭ್ಯಗಳು (Mini Tractor Subsidy)..?
- ಕೃಷಿ ಹೊಂಡ ನಿರ್ಮಾಣ ಮಾಡಲು ಈ ಒಂದು ಯೋಜನೆ ಅಡಿಯಲ್ಲಿ ರೈತರು ಶೇಕಡ 80 ರಿಂದ 90% ರಿಯಾಯಿತಿ ಸರಕಾರ ಕಡೆಯಿಂದ ಪಡೆದುಕೊಳ್ಳಬಹುದು
- ಈ ಯೋಜನೆ ಅಡಿಯಲ್ಲಿ ರೈತರು ತಮ್ಮ ಜಮೀನಿಗೆ ತಂತಿ ಬೇಲಿ ನಿರ್ಮಾಣ ಮಾಡಲು ಆರ್ಥಿಕ ನೆರವು ಪಡೆಯಬಹುದು
- ಈ ಯೋಜನೆ ಅಡಿಯಲ್ಲಿ ಸೋಲಾರ್ ಪಂಪ್ ಸೆಟ್ ಅಥವಾ ಡೀಸೆಲ್ ಪಂಪ್ ಸೆಟ್ ಅಥವಾ ವಿದ್ಯುತ್ ಚಾಲಿತ ಪಂಪ್ಸೆಟ್ ಪಡೆದುಕೊಳ್ಳಲು ಸಬ್ಸಿಡಿ ಅಥವಾ ಆರ್ಥಿಕ ನೆರವು ಸಿಗುತ್ತದೆ
- ಈ ಯೋಜನೆ ಅಡಿಯಲ್ಲಿ ರೈತರು ತುಂತುರು ನೀರಾವರಿ ಹಾಗೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಸಬ್ಸಿಡಿ ಸಿಗುತ್ತದೆ ಹಾಗೂ ಕಿಂಕ್ಲರ್ ಪೈಪ್ ಮತ್ತು ಇತರ ಸೌಲಭ್ಯಗಳು ಈ ಯೋಜನೆಯಲ್ಲಿ ಲಭ್ಯವಿದೆ
ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
- ರೈತರು ಈ ಒಂದು ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಲಾಭ ಪಡೆಯಬೇಕಾದರೆ ಕನಿಷ್ಠ ಒಂದು ಎಕರೆ ಭೂಮಿ ಹೊಂದಿರಬೇಕು
- ಕೃಷಿಭಾಗ್ಯ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ರೈತರು ಕಳೆದ ವರ್ಷದಲ್ಲಿ ಈ ಯೋಜನೆಯ ಪ್ರಯೋಜನ ಪಡೆದರೆ ಅಂತವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ
- ಕೃಷಿಭಾಗ್ಯ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ರೈತರು ಅಗತ್ಯ ಇರುವ ಎಲ್ಲಾ ದಾಖಲಾತಿಗಳನ್ನು ಒದಗಿಸಬೇಕಾಗುತ್ತದೆ
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು..?
- ರೈತರ ಪಹಣಿ (RTC)
- ರೈತರ ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ರೂ. 100 ಬಾಂಡ್ ಪೇಪರ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಲಾವಣಿ ಮತ್ತು ನೀರು ಬಳಕೆಯ ಪ್ರಮಾಣ ಪತ್ರ
- ಇತರೆ ಅಗತ್ಯ ದಾಖಲಾತಿಗಳು
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ನೀವು ಕೃಷಿಭಾಗ್ಯ ಯೋಜನೆ ಅಡಿಯಲ್ಲಿ ಮೇಲೆ ತಿಳಿಸಿದ ಎಲ್ಲಾ ಲಾಭಗಳನ್ನು ಪಡೆದುಕೊಳ್ಳಲು ಬಯಸುತ್ತಿದ್ದರೆ ಪ್ರಸ್ತುತ ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ರೈತರಿಗೆ ಅವಕಾಶ ಮಾಡಿಕೊಡಲಾಗಿದ್ದು ಆದ್ದರಿಂದ ಆಸಕ್ತಿ ಇರುವಂತಹ ರೈತರು ಮೇಲೆ ತಿಳಿಸಿದಂಥ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ