Drdo recruitment 2025 last date:- 10Th, PUC, ITI ಪಾಸಾದವರಿಗೆ ಕೇಂದ್ರ ರಕ್ಷಣಾ ಸಚಿವಾಲಯದ ಉದ್ಯೋಗ.! ಈ ರೀತಿ ಅರ್ಜಿ ಸಲ್ಲಿಸಿ.!
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ನಾವು ಡಿ ಆರ್ ಡಿ ಓ ಅಥವಾ ಭಾರತೀಯ ರಕ್ಷಣಾ ಸಚಿವಾಲಯದಲ್ಲಿ ಖಾಲಿ ಇರುವ 113 ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ತಿಳಿದುಕೊಳ್ಳೋಣ ಹಾಗೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಹಾಗೂ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಎಷ್ಟು ವಯಸ್ಸು ಹೊಂದಿರಬೇಕು ಹಾಗೂ ಅರ್ಜಿ ಸಲ್ಲಿಸಲು ಇರುವ ವಿದ್ಯಾರ್ಹತೆ ಏನು ಎಂಬ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
ಭಾರತೀಯ ರಕ್ಷಣಾ ಸಚಿವಾಲಯ ನೇಮಕಾತಿ (Drdo recruitment 2025 last date)..?
ಹೌದು ಸ್ನೇಹಿತರೆ ನಮ್ಮ ದೇಶದ ಡಿ ಆರ್ ಡಿ ಓ ಅಥವಾ ಭಾರತೀಯ ರಕ್ಷಣಾ ಸಚಿವಾಲಯ ತನ್ನ ಸಂಸ್ಥೆಯಲ್ಲಿ ಖಾಲಿ ಇರುವ 113 ವಿವಿಧ ಅಪ್ರೆಂಟಿಸ್ ಹಾಗೂ ಇತರ ಹಲವಾರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಈ ಒಂದು ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು 06 ಫೆಬ್ರುವರಿ 2025 ದಿನಾಂಕದ ಒಳಗಡೆ ಅರ್ಜಿ ಸಲ್ಲಿಸಬೇಕಾಗುತ್ತದೆ.!

DRDO ಅಥವಾ ಭಾರತೀಯ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಪ್ರಕಾರ ಈ 113 ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಹೊಂದಿರಬೇಕಾದ ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸಲು ಇರುವ ವಯೋಮಿತಿ ಮತ್ತು ಅರ್ಜಿ ಶುಲ್ಕ ಮತ್ತು ಎಷ್ಟು ಸಂಬಳ ನೀಡಲಾಗುತ್ತದೆ ಎಂಬ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
ಹುದ್ದೆಗಳ ನೇಮಕಾತಿ ವಿವರ (Drdo recruitment 2025 last date)..?
ನೇಮಕಾತಿ ಇಲಾಖೆ:- ಭಾರತೀಯ ರಕ್ಷಣಾ ಸಚಿವಾಲಯ
ಹುದ್ದೆಗಳ ಸಂಖ್ಯೆ:- 113 ಖಾಲಿ ಹುದ್ದೆಗಳು
ಅರ್ಜಿ ಸಲ್ಲಿಸುವ ವಿಧಾನ:- online ಮೂಲಕ
ಹುದ್ದೆಗಳ ಹೆಸರು:- ವಿವಿಧ ಹುದ್ದೆಗಳು
ಅರ್ಜಿ ಪ್ರಾರಂಭ ದಿನಾಂಕ:- 07/01/2025
ಅರ್ಜಿ ಕೊನೆಯ ದಿನಾಂಕ:- 06/02/2025
DRDO ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
ಶೈಕ್ಷಣಿಕ ಅರ್ಹತೆ:– DRDO ದಲ್ಲಿ ಖಾಲಿ ಇರುವ 113 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ, ITI, ಡಿಪ್ಲೋಮೋ ಹಾಗೂ ಪದವಿ ಪೂರ್ಣಗೊಳಿಸಿರಬೇಕು ಹಾಗೂ ಇತರ ವಿದ್ಯಾರ್ಥಿ ಹೊಂದಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಹೆಚ್ಚಿನ ವಿವರಕ್ಕಾಗಿ ನೀವು ಅಧಿಕೃತ PDF ಡೌನ್ಲೋಡ್ ಮಾಡಿಕೊಳ್ಳಿ
ವಯೋಮಿತಿ:- DRDO ದಲ್ಲಿ ಖಾಲಿ ಇರುವ 113 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು DRDO ಬಿಡುಗಡೆ ಮಾಡಿರುವ ನೇಮಕಾತಿ ಅಧಿಸೂಚನೆ ಪ್ರಕಾರ ಕನಿಷ್ಠ 18 ವರ್ಷ ಹಾಗೂ 27 ವರ್ಷದ ಒಳಗಿನ ವಯಸ್ಸು ಕರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು ಮೀಸಲಾತಿ ಆಧಾರದ ಮೇಲೆ SC/ST ಅಭ್ಯರ್ಥಿಗಳಿಗೆ 05 ವರ್ಷ ಹಾಗೂ PWD/ಮಾಜಿ ಸೈನಿಕರಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ ಹೆಚ್ಚಿನ ವಿವರಕ್ಕಾಗಿ ಅಧಿಕೃತ ಅಧಿಸೂಚನೆ ಓದಿಕೊಳ್ಳಿ
ಸಂಬಳ ಎಷ್ಟು:– DRDO ದಲ್ಲಿ ಖಾಲಿ ಇರುವ 113 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಯ್ಕೆ ಆದ ನಂತರ ತಿಂಗಳಿಗೆ 18,000 ರೂಪಾಯಿಯಿಂದ ಗರಿಷ್ಠ 92 ಸಾವಿರದವರೆಗೆ ಹುದ್ದೆಗಳ ಅನುಗುಣವಾಗಿ ಸಂಬಳ ನೀಡಲಾಗುತ್ತದೆ
ಆಯ್ಕೆ ವಿಧಾನ:- DRDO ದಲ್ಲಿ ಖಾಲಿ ಇರುವ 113 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಲಿಖಿತ ಪರೀಕ್ಷೆಗಳ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ನೀವು ಡಿಆರ್‌ಡಿಓ ಅಥವಾ ಭಾರತೀಯ ರಕ್ಷಣಾ ಸಂಸ್ಥೆಯಲ್ಲಿ ಖಾಲಿ ಇರುವ ಈ 113 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಮೊದಲು ಈ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾಹಿತಿ ಪಡೆದುಕೊಂಡು ನಂತರ ನಿಮ್ಮ ಹತ್ತಿರದ ಆನ್ಲೈನ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಅಥವಾ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಕೆಳಗಡೆ ನೀಡಿದ್ದೇವೆ ಅದನ್ನು ಬಳಸಿಕೊಂಡು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
www.drdo.gov.in/drdo/
ಸ್ನೇಹಿತರೆ ನಿಮಗೆ ಇದೇ ರೀತಿ ಸರಕಾರಿ ಹುದ್ದೆಗಳ ನೇಮಕಾತಿ ಹಾಗೂ ನಮ್ಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಹಾಗೂ ಪ್ರೈವೇಟ್ ಸಂಸ್ಥೆಗಳಲ್ಲಿ ಕಾಲಿರುವ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ಇತರ ಹುದ್ದೆಗಳಿಗೆ ಸಂಬಂಧಿಸಿದ ನೇಮಕಾತಿ ಕುರಿತು ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಜಾಯಿನ್ ಆಗಬಹುದು