Shakti Scheme: ಶಕ್ತಿ ಯೋಜನೆಗೆ ಹೊಸ ರೂಲ್ಸ್.! ಇನ್ನು ಮುಂದೆ ಉಚಿತ ಪ್ರಯಾಣ ಮಾಡಲು ಸ್ಮಾರ್ಟ್ ಕಾರ್ಡ್ ವಿತರಣೆ.! ಇಲ್ಲಿದೆ ವಿವರ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದಂತ ಶಕ್ತಿ ಯೋಜನೆ.! ಈ ಯೋಜನೆ ಅಡಿಯಲ್ಲಿ ಸರಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸಲಾಗಿದೆ.! ಮತ್ತು ಈ ಉಚಿತ ಪ್ರಯಾಣಕ್ಕೆ ಮಹಿಳೆಯರು ಆಧಾರ್ ಕಾರ್ಡ್ ತೋರಿಸಬೇಕಾಗಿತ್ತು. ಆದರೆ ಇನ್ನು ಮುಂದೆ ರಾಜ್ಯ ಸರ್ಕಾರ ಹೊಸ ರೂಲ್ಸ್ ಜಾರಿಗೆ ತರಲಾಗಿದ್ದು ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಈ ಒಂದು ಲೇಖನ ಮೂಲಕ ಮಾಹಿತಿ ತಿಳಿದುಕೊಳ್ಳೋಣ
ಜಿಯೋ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ.! ನೀವು ಜಿಯೋ ಗ್ರಾಹಕರಾಗಿದ್ದರೆ ಈ ಒಂದು ಲೇಖನವನ್ನು ಓದಿ
ಶಕ್ತಿ ಯೋಜನೆ (Shakti Scheme)..?
ಸ್ನೇಹಿತರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಈ ಗ್ಯಾರಂಟಿ ಯೋಜನೆಗಲ್ಲಿ ಶಕ್ತಿ ಯೋಜನೆಯು ಕೂಡ ಒಂದಾಗಿದ್ದು ಈ ಯೋಜನೆಯಲ್ಲಿ ಮಹಿಳೆಯರು ಸರಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟಿದೆ.! ಹೌದು ಸ್ನೇಹಿತರೆ ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಸರಕಾರಿ ಬಸ್ಸುಗಳಲ್ಲಿ ಆಧಾರ್ ಕಾರ್ಡ್ ತೋರಿಸಿ ಕರ್ನಾಟಕದ ಯಾವುದೇ ಪ್ರದೇಶಕ್ಕೆ ಉಚಿತ ಪ್ರಯಾಣ ಮಾಡಲು ಈ ಯೋಜನೆ ಅಡಿಯಲ್ಲಿ ಅನುಕೂಲ ಮಾಡಿಕೊಡಲಾಗಿದೆ
ಹೌದು ಸ್ನೇಹಿತರೆ ಈ ಶಕ್ತಿ ಯೋಜನೆ 11 ಜೂನ್ 2023 ರಂದು ಜಾರಿಗೆಗೋಳಿಸಲಾಗಿದ್ದು ಈ ಯೋಜನೆ ಅಡಿಯಲ್ಲಿ 356 ಕೋಟಿ ಗಿಂತ ಹೆಚ್ಚು ಮಹಿಳೆಯರು ಉಚಿತ ಬಸ್ ಸೇವೆಯನ್ನು ಬಳಸಿಕೊಂಡಿದ್ದಾರೆ ಎಂದು ವರದಿಗಳು ಬಂದಿದೆ ಮತ್ತು ಈ ಬಗ್ಗೆ ಸಾರಿಗೆ ಇಲಾಖೆಯೂ ಕೂಡ ಸ್ಪಷ್ಟ ಮಾಹಿತಿ ನೀಡಿದೆ ಹಾಗಾಗಿ ಈ ಒಂದು ಯೋಜನೆ ಕರ್ನಾಟಕದಲ್ಲಿ ತುಂಬಾ ಯಶಸ್ವಿಯಾದ ಯೋಜನೆಯಾಗಿ ಪರಿವರ್ತನೆಗೊಂಡಿದೆ
ಉಚಿತ ಪ್ರಯಾಣಕ್ಕೆ ಹೊಸ ರೂಲ್ಸ್ (Shakti Scheme)..?
ಹೌದು ಸ್ನೇಹಿತರೆ, ಇನ್ನು ಮುಂದೆ ಉಚಿತ ಪ್ರಯಾಣ ಮಾಡುವಂತ ಮಹಿಳೆಯರಿಗಾಗಿ ಹೊಸ ರೂಲ್ಸ್ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ ಅದು ಏನು ಎಂದರೆ ಮಹಿಳೆಯರಿಗೆ ಹೊಸ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲು ಸರಕಾರ ಚಿಂತನೆ ನಡೆಸುತ್ತಿದೆ.!
ಹೌದು ಸ್ನೇಹಿತರೆ ಉಚಿತ ಬಸ್ ಪ್ರಯಾಣ ಮಾಡುವಾಗ ಮಹಿಳೆಯರು ಆಧಾರ್ ಕಾರ್ಡ್ ತೋರಿಸಬೇಕಾಗಿತ್ತು ಮತ್ತು ಇದನ್ನು ಬಸ್ ಕಂಡಕ್ಟರ್ ಪರಿಶೀಲನೆ ಮಾಡುವುದು ಅತ್ಯಗತ್ಯವಾಗಿತ್ತು ಏಕೆಂದರೆ ಆಧಾರ್ ಕಾರ್ಡ್ ಹೊಂದಿದಂತ ಮಹಿಳೆ ಕರ್ನಾಟಕದವರೇ ಅಥವಾ ಇಲ್ಲವೇ ಎಂಬ ಖಚಿತ ಮಾಹಿತಿ ಪಡೆದುಕೊಳ್ಳಬೇಕು ಹಾಗೂ ನಂತರ ಉಚಿತ ಬಸ್ ಟಿಕೆಟ್ ನೀಡಬೇಕಾಗಿತ್ತು. ಇದರಿಂದ ಬಸ್ ನಿರ್ವಾಹಕರಿಗೆ ಬಹಳ ತೊಂದರೆ ಉಂಟಾಗುವುದಲ್ಲದೆ ಮಹಿಳೆಯರ ಜೊತೆ ಜಗಳ ಉಂಟಾಗುತ್ತಿತ್ತು
ಆದ್ದರಿಂದ ರಾಜ್ಯ ಸರ್ಕಾರ ಉಚಿತ ಬಸ್ ಪ್ರಯಾಣ ಮಾಡುವಂತ ಮಹಿಳೆಯರಿಗೆ ಹೊಸ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲು ಮುಂದಾಗಿದ್ದು ಈ ಒಂದು ಸ್ಮಾರ್ಟ್ ಕಾರ್ಡ್ ಪಡೆಯಲು ಮಹಿಳೆಯರಿಗೆ ಮಾತ್ರ ಅರ್ಹತೆ ನೀಡಲಾಗಿರುತ್ತದೆ ಇದರಿಂದ ನಿರ್ವಾಹಕರಿಗೂ ಕೂಡ ಉಚಿತ ಟಿಕೆಟ್ ಕೊಡಲು ಯಾವುದೇ ರೀತಿ ತೊಂದರೆ ಉಂಟಾಗುವುದಿಲ್ಲ.!
ಸ್ಮಾರ್ಟ್ ಕಾರ್ಡ್ ಪಡೆಯಲು ಏನು ಬೇಕು..?
ಸ್ನೇಹಿತರೆ ಪ್ರಸ್ತುತ ಸ್ಮಾರ್ಟ್ ಕಾರ್ಡ್ ವಿತರಣೆ ಇನ್ನೂ ಶುರು ಮಾಡಿಲ್ಲ ಹಾಗಾಗಿ ವಿತರಣೆ ಶುರುವಾದ ನಂತರ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ಹಾಗೂ ಇತರ ವಿಳಾಸದ ದಾಖಲಾತಿಗಳನ್ನು ಕೊಟ್ಟು ಈ ಒಂದು ಸ್ಮಾರ್ಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಹಾಗಾಗಿ ಇದಕ್ಕೆ ಸಂಬಂಧಿಸಿದಂತ ಪ್ಲಾನ್ ಸರ್ಕಾರ ಮಾಡುತ್ತಿದ್ದು ಇನ್ನೂ ಸ್ಮಾರ್ಟ್ ಕಾರ್ಡ್ ವಿತರಣೆ ಪ್ರಾರಂಭವಾಗಿಲ್ಲ ಇದನ್ನು ಗಮನದಲ್ಲಿಟ್ಟುಕೊಳ್ಳಿ
ಹೌದು ಸ್ನೇಹಿತರೆ ಇನ್ನು ಕೆಲವು ದಿನಗಳ ಕಾಲ ಆಧಾರ್ ಕಾರ್ಡ್ ಬಳಸಿಕೊಂಡು ಮಹಿಳೆಯರು ಉಚಿತ ಟಿಕೇಟ್ ಪಡೆದುಕೊಂಡು ಪ್ರಯಾಣ ಮಾಡಬಹುದು.! ಆದ್ದರಿಂದ ಸದ್ಯದಲ್ಲೇ ಈ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲು ಸರಕಾರ ಪ್ರಾರಂಭ ಮಾಡಲು ಚಿಂತನೆ ನಡೆಸುತ್ತಿದೆ ಈ ಒಂದು ಸ್ಮಾರ್ಟ್ ಕಾರ್ಡ್ ಬಳಸುವುದರಿಂದ ನಿರ್ವಾಹಕರಿಗೆ ಶೂನ್ಯ ಟಿಕೆಟ್ ನೀಡುವುದರಲ್ಲಿ ಯಾವುದೇ ರೀತಿ ತೊಂದರೆ ಉಂಟಾಗುವುದಿಲ್ಲ ಹಾಗೂ ಟಿಕೆಟ್ ನೀಡಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಆದ್ದರಿಂದ ಮೂಲಗಳ ಮಾಹಿತಿಯ ಪ್ರಕಾರ ಶೀಘ್ರದಲ್ಲೇ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಮಾಹಿತಿ ತಿಳಿಸಿದ್ದಾರೆ
ಸ್ಮಾರ್ಟ್ ಕಾರ್ಡ್ ನಿಂದ ಏನು ಉಪಯೋಗ..?
ಮಹಿಳೆಯರು ಸ್ಮಾರ್ಟ್ ಕಾರ್ಡ್ ಪಡೆಯುವುದರಿಂದ ಉಚಿತ ಬಸ್ ಪ್ರಯಾಣ ಮಾಡಲು ಅನುಕೂಲವಾಗುತ್ತದೆ ಇದರ ಜೊತೆಗೆ ಎಲ್ಲಿಂದ ಮತ್ತು ಎಲ್ಲಿಗೆ ಹೋಗಬೇಕು ಎಂಬ ನಿಖರ ಮಾಹಿತಿ ದೊರೆಯುತ್ತದೆ ಆದ್ದರಿಂದ ಆಧಾರ್ ಕಾರ್ಡ್ ನಲ್ಲಿ ಆಗುವಂತ ಯಾವುದೇ ರೀತಿ ತೊಂದರೆ ಈ ಒಂದು ಕಾರ್ಡ್ ಬಳಸಿದರೆ ಆಗುವುದಿಲ್ಲ
ಈ ಸ್ಮಾರ್ಟ್ ಕಾರ್ಡ್ ಪಡೆಯುವುದರಿಂದ ಮಹಿಳೆಯರಿಗೆ ಬೇಗ ಉಚಿತ ಟಿಕೆಟ್ ಸಿಗುತ್ತದೆ ಹಾಗೂ ನಿರ್ವಾಹಕರಿಗೂ ಕೂಡ ತುಂಬಾ ಸುಲಭವಾಗಿ ಟಿಕೆಟ್ ವಿತರಣೆ ಮಾಡಲು ಸಾಧ್ಯವಾಗುತ್ತದೆ
ಈ ಸ್ಮಾರ್ಟ್ ಕಾರ್ಡ್ ಬಳಸುವುದರಿಂದ ಮಹಿಳೆಯರನ್ನು ಸುಲಭವಾಗಿ ನಮ್ಮ ಕರ್ನಾಟಕದ ನಿವಾಸಿಗಳೆಂದು ಗುರುತಿಸಲು ಸಾಧ್ಯವಾಗುತ್ತದೆ ಹಾಗೂ ಉಚಿತ ಪ್ರಯಾಣದ ನಿಖರತೆ ಈ ಒಂದು ಸ್ಮಾರ್ಟ್ ಕಾರ್ಡ್ ಮೂಲಕ ಸರಕಾರಕ್ಕೆ ತಿಳಿಯುತ್ತದೆ
ವಿಶೇಷ ಸೂಚನೆ:- ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ರೈತರಿಗೆ ಸಂಬಂಧಿಸಿದ ಸಬ್ಸಿಡಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದು ಹೇಗೆ ಹಾಗು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಇತರ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಮಾಹಿತಿ ಪಡೆಯಲು ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಬಹುದು