e Shram card :- ನಮಸ್ಕಾರ ಸ್ನೇಹಿತರೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ ಕೇಂದ್ರ ಸರ್ಕಾರದ ಜಾರಿಗೆ ತಂದಿರುವ ಈ ಶ್ರಮ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸುವುದರ ಮುಖಾಂತರ ಅರ್ಜಿದಾರರು ಪ್ರತಿ ತಿಂಗಳು 3000 ಹಣವನ್ನು ಪಡೆದುಕೊಳ್ಳಬಹುದು ಹಾಗೂ ಎರಡು ಲಕ್ಷ ರೂಪಾಯಿ ಜೀವ ವಿಮೆ ಈ ಒಂದು ಯೋಜನೆ ಅಡಿಯಲ್ಲಿ ನೀಡಲಾಗುತ್ತಿದೆ. ಈ ಲೇಖನದ ಮೂಲಕ ಈ ಯೋಜನೆಗೆ ಯಾರು ಅರ್ಜಿ ಹಾಕಬಹುದು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಮುಂತಾದ ವಿವರಗಳ ಬಗ್ಗೆ ಈ ಕೆಳಗೆ ನೋಡೋಣ.
ಹೌದು ಗೆಳೆಯರೇ ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗಾಗಿ ಈ ಶ್ರಮ ಕಾಡು ಯೋಜನೆ ಜಾರಿಗೆ ತರಲಾಗಿದೆ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪ್ರತಿ ತಿಂಗಳ 3000 ಹಣ 2 ಲಕ್ಷ ರೂಪಾಯಿಗಳ ವರೆಗೂ ಮುಂತಾದ ಸೌಲಭ್ಯವನ್ನು ಈ ಯೋಜನೆ ಅರ್ಜಿದಾರರಿಗೆ ನೀಡಲಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದು ನಮ್ಮ ಆಸೆ ಇದೆ.
(e Shram card) ಈ ಶ್ರಮ ಕಾರ್ಡ್.
ಹೌದು ಗೆಳೆಯರೇ ಕೇಂದ್ರ ಸರ್ಕಾರವು ನಮ್ಮ ದೇಶದಲ್ಲಿರುವ ಸಂಘಟಿತ ವಲಯದ ಕೂಲಿಕಾರ್ಮಿಕರಿಗಾಗಿ ಹಾಗೂ ದಿನಗೂಲಿ ಕೆಲಸ ಮಾಡುವ ಕಾರ್ಮಿಕರಿಗೆ ಮತ್ತು ರೈತ ಕುಟುಂಬಗಳಿಗೆ ಹಾಗೂ ಬಡವರ್ಗದ ಜನರಿಗೆ ಮತ್ತು ನಿರ್ಗತಿಕರು ಮುಂತಾದ ಜನರಿಗೆ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ 60 ವರ್ಷ ದಾಟಿದ ನಂತರ 3000 ಹಣ ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ. ಹಾಗಾಗಿ ಯೋಜನೆ ಸಾಕಷ್ಟು ಪ್ರಾಮುಖ್ಯತೆ ಹೊಂದಿದ್ದು ಆದ್ದರಿಂದ ಈ ಯೋಜನೆ ಹಲವಾರು ಲಾಭಗಳು ಅರ್ಜಿದಾರರು ಪಡೆಯಬಹುದು ಇದಕ್ಕೆ ಸಂಬಂಧಿಸಿದ ಮಾಹಿತಿ ಈ ಕೆಳಗೆ ನೋಡೋಣ ಬನ್ನಿ.
(e Shram card) ಈ ಶ್ರಮ ಕಾರ್ಡ್ ಪ್ರಯೋಜನಗಳು..?
₹3,000 ಮಾಸಿಕ ಪಿಂಚಣಿ : ಹೌದು ಗೆಳೆಯರೇ ಈ ಶ್ರಮ ಕಾರ್ಡ್ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ತಿಂಗಳಿಗೆ 3000 ಹಣವನ್ನು ಮಾಸಿಕ ಪಿಂಚಣಿ ರೂಪದಲ್ಲಿ ಅಂದರೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ 60 ವರ್ಷ ದಾಟಿದ ನಂತರ ಈ ಒಂದು ಯೋಜನೆ ಅಡಿಯಲ್ಲಿ 3000ಗಳನ್ನು ಪ್ರತಿ ತಿಂಗಳು ಪಡೆದುಕೊಳ್ಳಬಹುದಾಗಿದೆ.( 60 ವರ್ಷ ದಾಟಿದ ನಂತರ ಮಾತ್ರ ಪ್ರತಿ ತಿಂಗಳು 3000 ಹಣ ಸಿಗುತ್ತದೆ.)
2, ಲಕ್ಷ ರೂಪಾಯಿ ಅಪಘಾತ ವಿಮೆ:- ಗೆಳೆಯರೇ ಈ ಶ್ರಮ ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ಎರಡು ಲಕ್ಷ ರೂಪಾಯಿಗಳವರೆಗೂ ಅಪಘಾತ ವಿಮೆ ಅಥವಾ ಜೀವ ವಿಮೆ ನೀಡಲಾಗುತ್ತದೆ ಅಂದರೆ ಈ ಶ್ರಮ ಕಾರ್ಡ್ ಹೊಂದಿದ ಫಲಾನುಭವಿಗಳು ಯಾವುದೇ ಅನಿರೀಕ್ಷಿತ ಘಟನೆಗಳಿಗೆ ನಿಧನರಾದರೆ ಅಥವಾ ಕೆಲಸದ ಸಂದರ್ಭದಲ್ಲಿ ಅಪಘಾತವಾಗಿ ಮೃತಪಟ್ಟರೆ ಅಂತ ಸಂದರ್ಭದಲ್ಲಿ ಎರಡು ಲಕ್ಷ ರೂಪಾಯಿ ಜೀವ ವಿಮೆ ಅಥವಾ ಅಪಘಾತ ವಿಮೆ ನೀಡಲಾಗುತ್ತದೆ.
1 ಲಕ್ಷ ರೂಪಾಯಿ ಆರ್ಥಿಕ ನೆರವು:- ಗೆಳೆಯರೇ ಈ ಶ್ರಮ ಕಾರ್ಡ್ ಇನ್ನು ಒಂದು ಪ್ರಯೋಜನವೆಂದರೆ ಈ ಯೋಜನೆ ಅಡಿಯಲ್ಲಿ ಅರ್ಜಿ ಹಾಕಿದ ಎಲ್ಲಾ ಫಲಾನುಭವಿಗಳಿಗೆ ಕೆಲಸ ಮಾಡುವಂತಹ ಸಂದರ್ಭದಲ್ಲಿ ಅಪಘಾತಕ್ಕೆ ಈಡಾದ ಸಂದರ್ಭದಲ್ಲಿ ಶಾಶ್ವತ ಅಂಗವಿಕಲತೆ ಉಂಟಾದರೆ ಅಂತ ಸಂದರ್ಭದಲ್ಲಿ ವೈದ್ಯಕೀಯ ನೆರವಿಗೆ ಅಥವಾ ವೈದ್ಯಕೀಯ ಖರ್ಚು ವೆಚ್ಚಕ್ಕೆ ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿದಾರರಿಗೆ 1 ಲಕ್ಷ ನೆರವು ನೀಡಲಾಗುತ್ತದೆ.
ಈ ಶ್ರಮ ಕಾರ್ಡ್ (e Shram card) ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು.?
- ಈ ಶ್ರಮ ಕಾರ್ಡ್ ಅರ್ಜಿ ಸಲ್ಲಿಸಲು ಬಯಸುವ ಫಲಾನುಭವಿಗಳು ಕಡ್ಡಾಯವಾಗಿ ಅಸಂಘಟಿತ ವಲಯದ ಕೂಲಿಕಾರ್ಮಿಕರು ಆಗಿರಬೇಕು. ಅಂದರೆ ರೈತರು ಕೃಷಿ ಕಾರ್ಮಿಕರು ದಿನಗೂಲಿ ಮಾಡುವವರು ಆಟೋರಿಕ್ಷ ಓಡಿಸುವವರು ಹೂ ಮಾರುವವರು ಬಡವರು ಅಂಥವರು ಅರ್ಜಿ ಸಲ್ಲಿಸಬಹುದು.
- ಈ ಶ್ರಮ ಕಾರ್ಡ್ ಪಡಿಯಲು ಬಯಸುವ ಅರ್ಜಿದಾರರು ಕಡ್ಡಾಯವಾಗಿ ತಮ್ಮ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂಪಾಯಿ ಮೀರಿರಬಾರದು.
- ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕಾಗುತ್ತದೆ ಮತ್ತು ಗರಿಷ್ಠ 59 ವರ್ಷದ ಒಳಗಿನ ಅಭ್ಯರ್ಥಿಗಳು ಈ ಯೋಜನೆ ಅರ್ಜಿ ಹಾಕಬಹುದು.
- ಈ ಶ್ರಮ ಕಾರ್ಡಿಗೆ ಖಾಸಗಿ ಉದ್ಯೋಗಿಗಳಿಗೆ ಮತ್ತು ಸರಕಾರ ಉದ್ಯೋಗಿಗಳು ಮತ್ತು ಇತರ ತಿಂಗಳಿಗೆ ನಿರ್ದಿಷ್ಟ ಸಂಬಳ ಪಡೆಯುವ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು (e Shram card)
- ಅರ್ಜಿದಾರ ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್ ವಿವರ.
- ಜಾಬ್ ಕಾರ್ಡ್ ಅಥವಾ ಕಾರ್ಮಿಕ ಕಾರ್ಡ್
- ವೋಟರ್ ಐಡಿ
- ಪ್ಯಾನ್ ಕಾರ್ಡ್
- ರೇಷನ್ ಕಾರ್ಡ್
- ಮೊಬೈಲ್ ನಂಬರ್
- ಇತರೆ ಅಗತ್ಯ ದಾಖಲೆಗಳು
ಈ ಶ್ರಮ ಕಾರ್ಡಿಗೆ ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ನೀವು ಈ ಶ್ರಮ ಕಾರ್ಡ್ ಅರ್ಜಿ ಸಲ್ಲಿಸಲು ಯೋಜನೆ ಎಲ್ಲಾ ಲಾಭ ಪಡೆದುಕೊಳ್ಳಲು ಬಯಸಿದರೆ ನೀವು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡುವ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಇದರ ಮೇಲೆ ಒತ್ತಿ
https://register.eshram.gov.in/